ದೇವಾಡಿಗ ಸಂಘ ಮುಂಬಯಿ: ಶಿಕ್ಷಣ ಸಮಿತಿಯ ವತಿಯಿಂದ ಯುವ ಸಮಾವೇಶ. | DSM

ದೇವಾಡಿಗ ಸಂಘ ಮುಂಬಯಿ: ಶಿಕ್ಷಣ ಸಮಿತಿಯ ವತಿಯಿಂದ ಯುವ ಸಮಾವೇಶ.

ಪದವಿ ಶಿಕ್ಷಣ ಅಭಿಯಾನ; ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ವಿತರಣೆ

Featured Image

ನವಿ ಮುಂಬಯಿ ಸೆಪ್ಟೆಂಬರ್ 14,: ದೇವಾಡಿಗ ಸಂಘ ಮುಂಬಯಿಯ ಶಿಕ್ಷಣ ಸಮಿತಿಯ ಸರ್ವ ಶಿಕ್ಷಣ ಅಭಿಯಾನ ಆರಂಭಿಸಿದ್ದು ಪ್ರತೀ ಸಮಾಜ ಬಾಂಧವರು ಕನಿಷ್ಠ ಪದವಿ ಶಿಕ್ಷಣ ಪಡೆಯುವಂತೆ ಸದಸ್ಯರಿಗೆ ಎಲ್ಲಾ ರೀತಿಯ ಸಹಾಯವನ್ನು ಸಂಘದ ವತಿಯಿಂದ ಪೂರೈಸಲಾಗುವುದು ಎಂದು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿ.ಎ. ಶ್ರೀ ಜಗದೀಶ್ ದೇವಾಡಿಗ ಹೇಳಿದರು.
ಆಗಸ್ಟ್ 15, 2026 ರಂದು ನವಿ ಮುಂಬಯಿಯ ನೆರೂಲ್‌ನಲ್ಲಿರುವ ದೇವಾಡಿಗ ಭವನದಲ್ಲಿ ಯಶಸ್ವಿಯಾಗಿ ಆಯೋಜಿಸಿದ ಯುವ ಸಮಾವೇಶವನ್ನು ಉದ್ದೇಶಿಸಿ ಶ್ರೀ ಜಗದೀಶ್ ದೇವಾಡಿಗರು ಮೇಲಿನ ಮಾತುಗಳನ್ನು ಹೇಳಿದರು. ಸರಕಾರಿ ಯೋಜನೆಗಳು, ಅವುಗಳ ನೋಂದಾವಣಿ ಮತ್ತು ಲಾಭಗಳ ಕುರಿತಾದ ಮಾರ್ಗದರ್ಶನ, 10ನೇ ತರಗತಿಯಲ್ಲಿ (SSC/ICSE/CBSE) ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ. ಸ್ನಾತಕೋತ್ತರ ಪದವೀಧರರ ಸನ್ಮಾನ ಮತ್ತು ವಿದ್ಯಾರ್ಥಿವೇತನ ವಿತರಣೆ ಮೊದಲಾದ ವಿಷಯಗಳ ಕಡೆ ಈ ಸಮಾವೇಶ ಕೇಂದ್ರವಾಗಿತ್ತು. ಇದರಲ್ಲಿ ಸಮಾಜದ ಮಕ್ಕಳು ಮತ್ತು ಅವರ ಪಾಲಕರು ಮತ್ತು ಸದಸ್ಯರು ಬಹುಸಂಖ್ಯೆಯಲ್ಲಿ ಪಾಲ್ಗೊಂಡರು.
ಸಂಘದ ಸದಸ್ಯರು ಮತ್ತು ಉಚ್ಚ ಶಿಕ್ಷಣ ತರಬೇತುದಾರರಾದ ಶ್ರೀಮತಿ ಸೋನಾಲಿ ಸೂರಜ್ ಸೇರಿಗಾರ್ ಮತ್ತು ಶ್ರೀ ಯೋಗೇಶ್ ಶ್ರೀಯಾನ್, ಇವರು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಪ್ರಮುಖ ಅಂಶಗಳನ್ನು ಕುರಿತು ಮಾರ್ಗದರ್ಶನ ನೀಡಿದರು.
ಶ್ರೀಮತಿ ಸೋನಾಲಿ ಇವರು ಉತ್ತಮ ಶಿಕ್ಷಣ, ಭವಿಷ್ಯದ ಕೌಶಲ್ಯಗಳು ಮತ್ತು ವೃತ್ತಿ ಸಿದ್ಧತೆ ಕುರಿತು ಮಾರ್ಗದರ್ಶನ ನೀಡಿದರೆ, ಶ್ರೀ ಯೋಗೇಶ್ ಶ್ರೀಯಾನ್ ಇವರು ಆರೋಗ್ಯ, ಯೋಗಕ್ಷೇಮ ಮತ್ತು ವೈಯಕ್ತಿಕ ಅಭಿವೃದ್ಧಿ ಕುರಿತು ಮಾರ್ಗದರ್ಶನ ನೀಡಿದರು . ಶ್ರೀ ದುರ್ಗೇಶ್ ಶ್ರೀವಾಸ್ತವ ಮತ್ತು ಶ್ರೀ ಭಾರ್ಗವ್ ಮೇವಾವಾಲ ಇವರು ಅತಿಥಿ ಭಾಷಣಕಾರರಾಗಿದ್ದು, ಹಣಕಾಸು ಸಾಕ್ಷರತೆ ಮತ್ತು ವೃತ್ತಿ ಯೋಜನೆ ಕುರಿತು ಅಮೂಲ್ಯವಾದ ಮಾರ್ಗದರ್ಶನ ನೀಡಿದರು. ಸಂಘದ ಸದಸ್ಯೆ ಶ್ರೀಮತಿ ಅಶ್ವಿನಿ ಕರಣ್ ದೇವಾಡಿಗ ಬಹಳ ಅಚ್ಚುಕಟ್ಟಾಗಿ ಮತ್ತು ಚೆನ್ನಾಗಿ ಮಾನವರಿಕೆಯಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಚೆಂಬೂರಿನ ಜನತಾ ಸೇವಾ ಕೇಂದ್ರದ ಶ್ರೀ ಕಿರಣ್ ಪಾಟೀಲ್ ಮತ್ತು ಅವರ ತಂಡದ ಸಹಕಾರದೊಂದಿಗೆ,
ಕೇಂದ್ರ ಸರಕಾರದ ಅನೇಕ ಯೋಜನೆಗಳ ಕುರಿತಾದ ಮಾರ್ಗದರ್ಶನ ಮತ್ತು ನೋಂದಣಿ ಶಿಬಿರದ ಆಯೋಜಿಸಲಾಗಿತ್ತು. ಶ್ರೀ ಕಿರಣ್ ಪಾಟೀಲ್ ಅವರು ವಿವಿಧ ಸರ್ಕಾರಿ ಯೋಜನೆಗಳಾದ ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಆಯುಷ್ಮಾನ್ ಭಾರತ್ ವಯಾ ವಂದನಾ ಯೋಜನೆ, ಆಯುಷ್ಮಾನ್ ಭಾರತ್ ಅಭಾ (ABHA) ಯೋಜನೆ, ಇ-ಶ್ರಮ್ (E- Shram) ಯೋಜನೆ, ಉದ್ಯೋಗ ಕಾರ್ಡ್/ಉದ್ಯೋಗ ವಿನಿಮಯ ಕಾರ್ಡ್ ಮತ್ತು ಇತರ ಹಲವಾರು ಸರ್ಕಾರಿ ಯೋಜನೆಗಳ ಪ್ರಯೋಜನಗಳು ಮತ್ತು ಅರ್ಹತೆಗಳ ಬಗ್ಗೆ ಮತ್ತು ಈ ಯೋಜನೆಗಳ ಲಾಭ ಪಡೆಯುವ ವಿಧಾನ ಗಳ ಕುರಿತು
ವಿವರಿಸಿದರು.
ಸ್ನಾತಕೋತ್ತರ ಪದವಿ ಪಡೆಯುತ್ತಿರುವ ನಾಲ್ವರು ವಿದ್ಯಾರ್ಥಿಗಳು ಹಾಗೂ 10ನೇ ತರಗತಿಯ (SSC/ICSE/CBSC) ಪರೀಕ್ಷೆಗಳಲ್ಲಿ ಶೇ. 90 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಏಳು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಇದರೊಂದಿಗೆ, ವಿಶೇಷ ಪ್ರತಿಭೆಗಳು ಮತ್ತು ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ
ಗೌರವಿಸಲಾಯಿತು. ಪ್ರತೀ ವರ್ಷದಂತೆ ಮುಂಬಯಿ ಪರೀಕ್ಷಾ ಮಂಡಳದ ೧೦ನೇ ತರಗತಿಯಲ್ಲಿ (SSC ಪರೀಕ್ಷೆಯಲ್ಲಿ) ಕನ್ನಡ ಮಾಧ್ಯಮದಲ್ಲಿ ಅತ್ಯುನ್ನತ ಅಂಕ ಗಳಿಸಿದ ಥಾಣೆಯ ಮಾಜಿವಾಡದಲ್ಲಿರುವ ಶ್ರೀ ಆದಿಶಕ್ತಿ ಕನ್ನಡ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅರ್ಪಿತಾ ಸಂಜು ಕುಮಾರ್ ರಾಥೋಡ್ ಅವರನ್ನು ಅವರ ಈ ಗಮನಾರ್ಹ ಸಾಧನೆಗಾಗಿ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಭಾರತದ ಉದಯೋನ್ಮುಖ ತಾರೆ ಹಾಗೂ ಬಿಲ್ಲುಗಾರಿಕೆಯಲ್ಲಿ ರಾಷ್ಟ್ರೀಯ ಮಟ್ಟದ ಚಿನ್ನದ ಪದಕ
ವಿಜೇತೆಯಾದ ಕುಮಾರಿ ಆಧ್ಯಾ ಸುಮನ್ ದೇವಾಡಿಗರನ್ನು ಅವರ ಗಮನಾರ್ಹ ಸಾಧನೆಗಾಗಿ ಸನ್ಮಾನಿಸಲಾಯಿತು.
ಆರ್ಥಿಕವಾಗಿ ಹಿಂದುಳಿದ ಮತ್ತು SSC ಪರೀಕ್ಷೆಯಲ್ಲಿ 95 ಶೇ ಅಂಕ ಗಳಿಸಿದ ಶ್ರಾವಣಿ ಸುಂದರ್ ಶೇರಿಗಾರ್ ಅವರ ಮುಂದಿನ
ವಿದ್ಯಾಭ್ಯಾಸಕ್ಕೆ ಸಂಘದ ಉಪಾಧ್ಯಕ್ಷ ಶ್ರೀ ನರೇಶ್ ದೇವಾಡಿಗರು ಪ್ರಾಯೋಜಿಸಿದ ಲ್ಯಾಪ್‌ಟಾಪ್ ಅನ್ನು ನೀಡಿ
ಗೌರವಿಸಲಾಯಿತು..
ಸುಮಾರು 100 ಅರ್ಹತಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳು ಮತ್ತು 16 ವಿದ್ಯರ್ಥಿಗಳಿಗೆ ವಿದ್ಯಾಧಾರೆ ಯೋಜನೆಯ ಪೂರ್ಣ ವೆಚ್ಚದ ವಿದ್ಯಾರ್ಥಿವೇತನಗಳನ್ನು ವಿತರಿಸಲಾಯಿತು.
ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಮತ್ತು ಶ್ರೀ ಎನ್. ಆರ್. ನಾರಾಯಣ ಮೂರ್ತಿ ಅವರಂತಹ ನಾಯಕರ ಸ್ಫೂರ್ತಿದಾಯಕ
ಜೀವನಪಯಣಗಳು ನಮಗೆ ಒಂದು ವಿಷಯವನ್ನು ನೆನಪಿಸುತ್ತವೆ: ಶಿಕ್ಷಣ, ದೃಢಸಂಕಲ್ಪ, ನಾವೀನ್ಯತೆ ಮತ್ತು ಪರಿಶ್ರಮಗಳಿಗೆ
ವ್ಯಕ್ತಿಗಳನ್ನು ಹಾಗೂ ಅಂತಿಮವಾಗಿ ಸಮಾಜವನ್ನೇ ಪರಿವರ್ತಿಸುವ ಶಕ್ತಿಯಿದೆ. ಇಂದೇ ನಮ್ಮ ಯುವ ಪೀಳಿಗೆಯಲ್ಲಿ ಹೂಡಿಕೆ
ಮಾಡುವ ಮೂಲಕ, ನಾವು ದೇವಾಡಿಗ ಸಮುದಾಯಕ್ಕೆ ಬಲವಾದ ಮತ್ತು ಉಜ್ವಲ ಭವಿಷ್ಯವನ್ನು ರೂಪಿಸಬಹುದು ಎಂದು ಶ್ರೀ ಜಗದೀಶ್ ದೇವಾಡಿಗರು ತನ್ನ ಅನಿಸಿಕೆಯನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮುಂದೆ ಮಂಡಿಸಿದರು.
ಸಂಘದ ಅಧ್ಯಕ್ಷ ರವಿ ಎಸ್. ದೇವಾಡಿಗ, ಉಪಾಧ್ಯಕ್ಷರುಗಳಾದ ಶ್ರೀ ನರೇಶ್ ಯಸ್ ದೇವಾಡಿಗ ಮತ್ತು ವಿಶ್ವನಾಥ್ ಬಿ
ದೇವಾಡಿಗ, ಗೌ. ಪ್ರ. ಕಾರ್ಯದರ್ಶಿ ಶ್ರೀ ಪದ್ಮನಾಭ ಎ. ದೇವಾಡಿಗ, ಗೌ. ಜೊತೆ ಕಾರ್ಯದರ್ಶಿಗಳಾದ ಶ್ರೀ ನಿತೇಶ್ ದೇವಾಡಿಗ ಮತ್ತು ಶ್ರೀಮತಿ ಸಚಿತಾ ಸುರೇಂದ್ರ ಶ್ರಿಯಾನ್ ಗೌ. ಜೊತೆ ಕೋಶಾಧಿಕಾರಿಗಳಾದ ಶ್ರೀ ಸುರೇಶ ಆರ್ ದೇವಾಡಿಗ. ಶ್ರೀ ಜಯ ಎಲ್. ದೇವಾಡಿಗ, ವ್ಯವಸ್ಥಾಪಕ ಮಂಡಳಿ ಸದಸ್ಯರು, ಪ್ರಾದೇಶಿಕ ಸಮಿತಿಗಳ ಸದಸ್ಯರು ಮತ್ತು ಸದಸ್ಯರು ಬಹು ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಸಿದರು.