ದೇವಾಡಿಗ ಸಂಘ ಮುಂಬಯಿ: 80 ನೇ ಸ್ವಾತಂತ್ರೋತ್ಸವ ಆಚರಣೆ | DSM

ದೇವಾಡಿಗ ಸಂಘ ಮುಂಬಯಿ: 80 ನೇ ಸ್ವಾತಂತ್ರೋತ್ಸವ ಆಚರಣೆ

ಸ್ವಾತಂತ್ರ್ಯದ ದುರುಪಯೋಗ ಸಲ್ಲದು - ರವಿ ಎಸ್. ದೇವಾಡಿಗ

Featured Image

ನವಿ ಮುಂಬಯಿ, ಆ.15: ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ದೇಶಭಕ್ತರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಬಲಿನೀಡಿದಾರೆ.ಅವರ ಹೋರಾಟ ಮತ್ತು ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಜೊತೆಯಲ್ಲಿ ದೇಶದ ಸಂವಿಧಾನವು ಪ್ರತೀ ಭಾರತೀಯರಿಗೆ ವಿಶಿಷ್ಟವಾದ ಹಕ್ಕುಗಳ ಸ್ವಾತಂತ್ರ್ಯ ನೀಡಿದ್ದು ಅದರ ದುರುಪಯೋಗ ನಡೆಯುತ್ತಿದೆ. ಈ ಸ್ವಾತ್ರ್ಯದ ದುರುಪಯೋಗವನ್ನು ನಿಲ್ಲಿಸಬೇಕು ಎಂದು ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ರವಿ ಎಸ್. ದೇವಾಡಿಗ ಇವರು ಹೇಳಿದರು.
ಮುಂಬಯಿಯ ಪ್ರತಿಷ್ಠಿತ ಸಂಘಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿ ಇದರ ವತಿಯಿಂದ ದೇಶದ 80ನೇ ಸ್ವಾತಂತ್ರ್ಯೋತ್ಸವದ ಮುಖ್ಯ ಧ್ವಜಾರೋಹಣ ಕಾರ್ಯಕ್ರಮವು ಸಂಘದ ಪ್ರಾದೇಶಿಕ ಸಾಂಸ್ಕ್ರತಿಕ ಕೇಂದ್ರವಾದ ದೇವಾಡಿಗ ಭವನ ನೆರೂಲ್ ನವಿ ಮುಂಬಯಿ ಇಲ್ಲಿ ಬಹಳ ಅದ್ದೊರಿಯಿಂದ ಆಗಸ್ಟ್ 15ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿದ ಸಂಘದ ಅಧ್ಯಕ್ಷರು ಈ ಮೇಲಿನ ಮಾತುಗಳನ್ನು ಹೇಳಿದರು. ಈ ಕಾರ್ಯಕ್ರಮಕ್ಕೆ ಉಪಸ್ಥಿತ ಎಲ್ಲರೂ ರಾಷ್ಟ್ರ ಗಾಯನ ಮತ್ತು ರಾಷ್ಟ್ರ ಗೀತೆ ಹಾಡಿ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿದರು.
ತನ್ನ ಮಾತುಗಳನ್ನು ಮುಂದುವರಿಸಿದ ಶ್ರೀ ರವಿ ದೇವಾಡಿಗರು ದೇವಾಡಿಗ ಸಮಾಜದಲ್ಲಿ ಪ್ರೇಮ, ಪ್ರೀತಿ, ವಿಶ್ವಾಸ ಮತ್ತು ಐಕ್ಯತೆಯನ್ನು ಬಾಂಧವರು ಬೆಳೆಸಿಕೊಳ್ಳಬೇಕಾಗಿ ಕರೆ ನೀಡಿದರು. ಪ್ರತೀ ಮನೆಗಳಲ್ಲಿ ಏಕತೆ ಮತ್ತು ಬಾಂಧವ್ಯವನ್ನು ಬೆಳೆಸುತ್ತಾ ಅದನ್ನು ಸಂಘ ಸಂಸ್ಥೆಗಳಲ್ಲಿಯೂ ಬೆಳೆಸಿಕೊಂಡಲ್ಲಿ ಸಮಗ್ರ ದೇಶದ ಭದ್ರತೆ ಮತ್ತು ಏಕತೆಗೆ ನಾಂದಿ ಎಂದು ಹೇಳುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಸ್ವಾತಂತ್ರ್ಯ ಸೇನಾನಿಗಳಿಗೆ ಶ್ರದ್ಧಾಂಜಲಿ ನೀಡಿ ಎಲ್ಲರಿಗೂ ಸ್ವಾತಂತ್ರೋತ್ಸವ ದಿನದ ಶುಭಾಶಯ ಕೋರಿದರು.
ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನದಾಸ್ ಮಾತನಾಡಿ ದೇವಾಡಿಗ ಸಂಘದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಯನ್ನು ಶ್ಲಾಘಿಸಿದರು. ದೇಶದ ಭದ್ರತೆ, ಅಖಂಡತೆ ಮತ್ತು ಪ್ರಗತಿ ಪ್ರತಿಯೊಬ್ಬರ ಕರ್ತವ್ಯ ಎನ್ನುತ್ತಾ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ನೀಡಿದವರನ್ನು ಸ್ಮರಿಸಲು ಮತ್ತು ಅದನ್ನು ಮುಂದಿನ ಪೀಳಿಗೆಯವರಿಗೆ ಮನದಟ್ಟು ಮಾಡಲು ಇಂತಹ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಸಾಕಷ್ಟು ಪ್ರಮಾಣದಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌ.ಪ್ರ. ಕಾರ್ಯದರ್ಶಿ ಶ್ರೀ ಪದ್ಮನಾಭ ಎ. ದೇವಾಡಿಗ, ಜೊತೆ ಕೋಶಾಧಿಕಾರಿ ಶ್ರೀ ಜಯ ಎಲ್. ದೇವಾಡಿಗ, ಮಾಜಿ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ. ಮೊಯ್ಲಿ, ವ್ಯವಸ್ಥಾಪಕ ಮಂಡಳಿ ಸದಸ್ಯ ನ್ಯಾಯವಾದಿ ಪ್ರಭಾಕರ್ ದೇವಾಡಿಗ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಪದ್ಮನಾಭ ಮೊಯ್ಲಿ, ಮಾಸ್ಟರ್ ಸಿದ್ಧಾಂತ್ ಡಿ. ದೇವಾಡಿಗ, ಶ್ರೀ ಕರುಣಾಕರ್ ಎಂ ಎಚ್ ಉಪಾಧ್ಯಕ್ಷರು - ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಮೊದಲಾದವರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ ಮತ್ತು ಶ್ರೀಮತಿ ಸಚಿತಾ ಸುರೇಂದ್ರ ಶ್ರೀಯಾನ್, ಜೊತೆ ಖಜಾಂಚಿ ಶ್ರೀ ಸುರೇಶ್ ದೇವಾಡಿಗ, ಪ್ರಾದೇಶಿಕ ಸಮಿತಿ ಸಮನ್ವಯಕ ಶ್ರೀ ಕಿರಣ್ ದೇವಾಡಿಗ, ವ್ಯವಸ್ಥಾಪಕ ಮಂಡಳಿಯ ಶ್ರೀ ರಾಮಣ್ಣ ಬಿ ದೇವಾಡಿಗ, ಶ್ರೀಮತಿ ಉಮಾವತಿ ಗುಜರನ್, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸೇರಿಗಾರ, ವಲಯದ ಶ್ರೀಮತಿ ಧನವತಿ ದೇವಾಡಿಗ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತಾ ಪಿ. ದೇವಾಡಿಗ, ಶ್ರೀಮತಿ ಲತಾ ಶೇರಿಗಾರ, ಶ್ರೀಮತಿ ಸುಮತಿ ದೇವಾಡಿಗ, ಡೊಂಬಿವಿಲಿ ವಲಯದ ಸದಾಶಿವ ತಲಪಾಡಿ, ಚೆಂಬೂರು ವಲಯದ ಶ್ರೀ ದಯಾನಂದ್ ದೇವಾಡಿಗ ಯೋಗೇಶ್ ಗುಜರನ್ , ಸಿಟಿ ವಲಯದ ಶ್ರೀ ಹೇಮನಾಥ್ ದೇವಾಡಿಗ, ಶ್ರೀಮತಿ ಪ್ರಜ್ಞ ಮೋಹನ್ದಾಸ್, ಮೀರಾರೋಡ್ ವಲಯದ ಶ್ರೀ ಆನಂದ್ ದೇವಾಡಿಗ, ಉದಯ ಕಣ್ವತೀರ್ಥ ಆಡಳಿತ ಸಮಿತಿ ಸದಸ್ಯರು ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು
ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಂದಿಸಿದರು. ಬಳಿಕ ಎಲ್ಲರಿಗೂ ಸಿಹಿ ಹಂಚಲಾಯಿತು.