ದೇವಾಡಿಗ ಸಂಘ ಮುಂಬಯಿಯ 101ನೇ ವಾರ್ಷಿಕ ಮಹಾಸಭೆ | DSM

ದೇವಾಡಿಗ ಸಂಘ ಮುಂಬಯಿಯ 101ನೇ ವಾರ್ಷಿಕ ಮಹಾಸಭೆ

ಪ್ರಾದೇಶಿಕ ಸಮಿತಿಗಳು ಮತ್ತು ಸಂಘದ ಪ್ರಾದೇಶಿಕ ವಾಸ್ತುಗಳಿಗೆ ಆದ್ಯತೆ - ರವಿ ಎಸ್ ದೇವಾಡಿಗ

Featured Image

ನವಿ ಮುಂಬಯಿ ಆ 20: ಸಂಘಕ್ಕೆ ನಮ್ಮ ಪ್ರಾದೇಶಿಕ ಸಮಿತಿಗಳೇ ಬಲ. ಸಂಘವನ್ನು ಬಲಪಡಿಸುವ ಉದ್ದೇಶದಿಂದಲೇ ಪ್ರಾದೇಶಿಕ ಸಮನ್ವಯ ಸಮಿತಿಗಳನ್ನು ಸ್ಥಾಪಿಸಲಾಗಿದ್ದು ಪ್ರಾದೇಶಿಕ ಸಮನ್ವಯ ಸಮಿತಿಗಳ ಬೇಡಿಕೆಗಳಿಗೆ ಆದ್ಯತೆ ನೀಡಿ ಅವುಗಳನ್ನು ಬಗೆಹರಿಸಲು ಎಲ್ಲಾ ಪ್ರಯತ್ನಗಳಿಗೆ ಸಂಘದ ಆಧ್ಯತೆ ಎಂದು ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಶರಾದ ಶ್ರೀ ರವಿ ಎಸ್ ದೇವಾಡಿಗ ಹೇಳಿದರು.
ಮುಂಬಯಿಯ ಪ್ರತಿಷ್ಠಿತ ಸಂಘಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿಯ 101ನೇ ವಾರ್ಷಿಕ ಮಹಾಸಭೆಯು ನವಿ ಮುಂಬಯಿ ನೆರೂಲ್ ನ ದೇವಾಡಿಗ ಭವನದಲ್ಲಿ ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ಜರಗಿತು. ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಹಾಸಭೆಯ ಪ್ರಕ್ರಿಯೆಗಳನ್ನು ಮುಂದುವರಿಸಿದರು. ಸಂಘದ ಈ ಮಹಾಸಭೆಗೆ ದೊಡ್ಡ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು.
ಮಹಾಸಭೆಯಲ್ಲಿ ಮಂಡಿಸಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿದ ಸಂಘದ ಅಧ್ಯಕ್ಷರು ತನ್ನ ಮಾತನ್ನ ಮುಂದುವರಿಸಿತ್ತಾ, ಪ್ರಾದೇಶಿಕ ಸಮನ್ವಯ ಸಮಿತಿಗಳ ಬೇಡಿಕೆಗಳನ್ನು ಮನಗಂಡು ಈ ಸಮಿತಿಗಳ ಕಾರ್ಯಕ್ರಮಗಳಿಗೆ ಆಗುವ ತೊಂದರೆ ಮತ್ತು ಆರ್ಥಿಕ ಹೊರೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಸಂಘದ ಪ್ರಾದೇಶಿಕ ಶಾಖೆಗಳನ್ನು ಆರಂಭಿಸುವ ಯೋಚನೆಯಲ್ಲಿದ್ದು, ಅದಕ್ಕೆ ಈ ಸಮಿತಿಗಳು ಸಮರ್ಪಕವಾದ ಸ್ಥಳಾವಕಾಶಗಳನ್ನು ಗೊತ್ತುಮಾಡುವಂತೆ ವಿನಂತಿಸಿಕೊಂಡರು.
ಸಂಘವು ಸಮಾಜದ ಜನರ ಶಿಕ್ಷಣ, ಅರೋಗ್ಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಬಹಳ ಉತ್ತಮ ಗತಿಯಲ್ಲಿ ಕೆಲಸ ಮಾಡುತ್ತಿದ್ದು ಅದಕ್ಕೆ ಬೇಕಾಗುವ ನಿಧಿಯನ್ನು ಹೆಚ್ಚಿಸುತ್ತಿದೆ. ಶತಮಾನವನ್ನು ಮುಗಿಸಿದ ಸಂಘವು ದೇವಾಡಿಗ ಸಮಾಜದ ಅಸ್ತಿತ್ವವನ್ನು ಜಗತ್ತಿಗೆ ತೋರಿಸಿಕೊಡಲು ಮತ್ತು ಸಮಾಜಕ್ಕೆ ಇನ್ನೂ ಹೆಚ್ಚಿನ ಕೆಲಸ ಮಾಡಲು ವಿಶ್ವದೇವಾಡಿಗ ಮಹಾಮಂಡಳದ ಮುಂದಾಳುತ್ವದಲ್ಲಿ ಜಗತ್ತಿನ ಎಲ್ಲಾ ದೇವಾಡಿಗ ಸಂಘಗಳನ್ನು ಒಟ್ಟುಗೂಡಿಸಿ ಬರುವ ಡಿಸೆಂಬರ್ ೨೦ರಂದು ಉಡುಪಿಯಲ್ಲಿ ದೇವಾಡಿಗ ಮಹಾಅಧಿವೇಶನಕ್ಕೆ ಬಹಳ ಚುರುಕಿನ ತಯಾರಿ ನಡೆಸುತ್ತಿದ್ದು, ಅದಕ್ಕೆ ಎಲ್ಲರ ಸಹಕಾರಕ್ಕೆ ಕರೆ ನೀಡಿದರು. ಸಂಘದ ಶ್ರೇಯಸ್ಸಿಗಾಗಿ ದುಡಿಯುತ್ತಿರುವ ಸಂಘದ ವ್ಯವಸ್ಥಾಪಕ ಮಂಡಳಿ, ಉಪಸಮಿತಿಗಳು, ಯುವ ವಿಭಾಗ, ಮಹಿಳಾ ವಿಭಾಗ ಹಾಗೂ ಪ್ರಾದೇಶಿಕ ಸಮನ್ವಯ ಸಮಿತಿಗಳನ್ನು ಅಧ್ಯಕ್ಷರು ಅಭಿನಂದಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಮತ್ತು ವಿಶ್ವದೇವಾಡಿಗ ಮಹಾಮಂಡಳದ ಅಧ್ಯಕ್ಷ ಶ್ರೀ ಧರ್ಮಪಾಲ ದೇವಾಡಿಗ ಮಾತನಾಡಿ ಬರುವ ಡಿಸೆಂಬರ್ ೨೦ರಂದು ಉಡುಪಿಯಲ್ಲಿ ವಿಶ್ವ ದೇವಾಡಿಗ ಮಹಾ ಅಧಿವೇಶನದ ಬಗ್ಗೆ ಮಾಹಿತಿ ನೀಡಿದರು. ಸಮಾಜದಲ್ಲಿ ದೇವಾಡಿಗ ಸಮಾಜವನ್ನು ಇನ್ನೂಕೀಳರಿಮೆ ಮನೋಭಾವದಿಂದ ನೋಡುವ ಪ್ರವೃತ್ತಿ ಇದೆ. ಅದಕ್ಕೆ ಸರಿಯಾದ ಉತ್ತರ ಕೊಡಲು ಈಗ ಸಮಯ ಬಂದಿದೆ. ದೇವಾಡಿಗರ ಅಸ್ತಿತ್ವವವನ್ನು ಸರಕಾರಕ್ಕೆ ಮನದಟ್ಟು ಮಾಡುವುದೇ ಈ ಅಧಿವೇಶನದ ಉದ್ದೇಶ. ಜೊತೆಯಲ್ಲಿ ದೇವಾಡಿಗ ಸಮಾಜ ಪ್ರಾಧಿಕಾರ ಮತ್ತು ಸರಕಾರದಲ್ಲಿ ದೇವಾಡಿಗ ಸಮಾಜಕ್ಕೆ ಬೇಕಾಗುವ ಪ್ರತಿನಿಧಿತ್ವ ಪಡೆಯಲು ಸಮಾಜದ ಪ್ರತೀ ಸದಸ್ಯರು ಒಟ್ಟಾಗಿ ಕೆಲಸ ಮಾಡಬೇಕಾಗಿ ಅವರು ಕರೆ ನೀಡಿದರು. ಸಂಘದ ಮಾಜಿ ಅಧ್ಯಕ್ಷರು ಮತ್ತು ವಿಶ್ವದೇವಾಡಿಗ ಮಹಾಮಂಡಳದ ಗೌ.ಪ್ರ. ಕಾರ್ಯದರ್ಶಿ ಶ್ರೀ ಹಿರಿಯಡ್ಕ ಮೋಹನದಾಸ್ ಸಭೆಯಲ್ಲಿ ಮಾತನಾಡಿ ಸದಸ್ಯರಿಗೆ ಉತ್ತಮ ಮಾರ್ಗದರ್ಶನ ನೀಡಿದರು.
ಆರಂಭದಲ್ಲಿ ಸಂಘದ ಗೌ.ಪ್ರ. ಕಾರ್ಯದರ್ಶಿ ಶ್ರೀ ಪದ್ಮನಾಭ ಎ. ದೇವಾಡಿಗ ಇವರು ಎಲ್ಲರನ್ನೂ ಸ್ವಾಗತಿಸಿ ಗತ ವರ್ಷದ ಮಹಾಸಭೆಯ ವರದಿಯನ್ನು ಓದಿ ಹೇಳಿದರು. ಬಳಿಕ ಸಂಘದ ವ್ಯವಸ್ಥಾಪಕ ಮಂಡಳಿಯ ವಾರ್ಷಿಕ ವರದಿ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರ ಕುರಿತು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿದರು. ಸದಸ್ಯರಲ್ಲಿ ಸಂಘದ ಅಧ್ಯಕ್ಷರು ಎಲ್ಲ ವಿಷಯಗಳನ್ನೂ ಸಭೆಯಲ್ಲಿ ಮಂಡಿಸಿ ಸದಸ್ಯರ ಒಪ್ಪಿಗೆ ಪಡೆದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀ ವಿಶ್ವನಾಥ ಬಿ. ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಶ್ರೀ ನಿತೇಶ್ ದೇವಾಡಿಗ ಮತ್ತು ಶ್ರೀಮತಿ ಸಚಿತಾ ಸುರೇಂದ್ರ ಶ್ರೀಯಾನ್; ಜೊತೆ ಖಜಾಂಚಿಗಳಾದ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀ ಜಯ ಎಲ್. ದೇವಾಡಿಗ ಇವರು ಉಪಸ್ಥಿತರಿದ್ದರು.
ಈ ವಾರ್ಷಿಕ ಮಹಾಸಭೆಗೆ ಮಾಜಿ ಅಧ್ಯಕ್ಷರುಗಳಾದ ಶ್ರೀ ವಾಸು ದೇವಾಡಿಗ, ಶ್ರೀ ಶ್ರೀನಿವಾಸ್ ಪಿ. ಕರ್ಮರನ್ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ ಇವರು ವಂದನಾರ್ಪಣೆಗೈದರು