ದೇವಾಡಿಗ ಸಂಘ ಮುಂಬಯಿ: ಶಿಕ್ಷಣ ವಿಭಾಗ ಮತ್ತು ಯುವ ವಿಭಾಗದ ವತಿಯಿಂದ ವೃತ್ತಿ ಮಾರ್ಗದರ್ಶನ ಶಿಬಿರ | DSM

ದೇವಾಡಿಗ ಸಂಘ ಮುಂಬಯಿ: ಶಿಕ್ಷಣ ವಿಭಾಗ ಮತ್ತು ಯುವ ವಿಭಾಗದ ವತಿಯಿಂದ ವೃತ್ತಿ ಮಾರ್ಗದರ್ಶನ ಶಿಬಿರ

ಸಮಾಜದ ಮಕ್ಕಳ ಶಿಕ್ಷಣಕ್ಕೆ ಸಂಘದ ಆದ್ಯತೆ: ರವಿ ಎಸ್. ದೇವಾಡಿಗ

Featured Image

ಮುಂಬಯಿ, ಜೂನ್ 2: ನಮ್ಮ ಸಮಾಜದ ಮಕ್ಕಳು ಭವಿಷ್ಯದಲ್ಲಿ ಸದ್ರಢರಾಗಬೇಕು. ಅದಕ್ಕೆ ಅವರಿಗೆ ಉತ್ತಮ ಶಿಕ್ಶಣ ಮತ್ತು ವೃತ್ತಿ ಮಾರ್ಗದರ್ಶನ ಜೊತೆಯಲ್ಲಿ ಆರ್ಥಿಕ ನೆರವು ಇತ್ಯಾದಿಗಳ ಅಗತ್ಯವಿದೆ. ಅವರಿಗೆ ಅಗತ್ಯವಿರುವ ಎಲ್ಲಾ ತರಹದ ಸಹಾಯ ನೀಡಲು ಸಂಘವು ಕಟಬದ್ಧವಾಗಿದೆ ಎಂದು ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ ಇವರು ಹೇಳಿದರು.
ದೇವಾಡಿಗ ಸಂಘ ಮುಂಬಯಿ ಇದರ ಶಿಕ್ಷಣ ವಿಭಾಗ ಮತ್ತು ಯುವ ವಿಭಾಗದ ವತಿಯಿಂದ ವೃತ್ತಿ ಮಾರ್ಗದರ್ಶನ ಶಿಬಿರದ ಕಾರ್ಯಕ್ರಮವನ್ನು ಸಂಘದ ದಾದರ್ ಪೂರ್ವದ ದೇವಾಡಿಗ ಸೆಂಟರ್ ಸಭಾಗ್ರಹದಲ್ಲಿ ಮೇ 31, 2026ರಂದು ಆಯೋಜಿಸಲಾಗಿತ್ತು. ಈ ಶಿಬಿರವನ್ನು ಉದ್ಘಾಟಿಸಿದ ಸಂಘದ ಅಧ್ಯಕ್ಷರು ಮೇಲಿನ ಮಾತುಗಳನ್ನು ಹೇಳಿದರು.
ತಮ್ಮ ಮಾತನ್ನು ಮುಂದುವರಿಸುತ್ತಾ ಶ್ರೀ ರವಿ ದೇವಾಡಿಗರು, ಸಂಘದ ಶಿಕ್ಷಣ ನೀತಿಯ ಬಗ್ಗೆ ವಿವರಿಸಿ ವಿದ್ಯಾರ್ಥಿಗಳಿಗೆ ಕೇವಲ ಸ್ಚಾಲರ್ಶಿಪ್ ನೀಡುವ ಆರ್ಥಿಕ ಸಹಾಯ ಅಲ್ಲದೆ ಹೆಚ್ಚಿನ ಶಿಕ್ಶಣಕ್ಕೆ ಬೇಕಾಗುವ ಎಲ್ಲ ತರಹದ ಆರ್ಥಿಕ ಸಹಾಯ ಮತ್ತು ಸಂಘದ ಅಕ್ಷಯ ಹಣಕಾಸು ಸಂಸ್ಥೆಯಿಂದ ಶಿಕ್ಷಣಕ್ಕೆ ನೀಡುವ ಸಾಲದ ಮಾಹಿತಿ ನೀಡುತ್ತಾ ಅದರ ಲಾಭ ಪಡೆದು ತಮ್ಮ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಂಘದ ಉಪಾಧ್ಯಕ್ಷರು ಮತ್ತು ಯುವ ಮಾರ್ಗದರ್ಶಕರಾದ ಶ್ರೀ ನರೇಶ್ ದೇವಾಡಿಗ ಇವರು ಮಾತನಾಡಿ ಭವಿಷ್ಯದಲ್ಲಿ ಯುವಕರಿಗೆ ಬಹಳಷ್ಟು ಸವಾಲುಗಳನ್ನು ಎದುರಿಸಿಯಬೇಕಾಗುತ್ತದೆ. ಯಾವುದೇ ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗಲು ಶಿಕ್ಷಣದ ಜೊತೆಗೆ ಯುವಕರ ವ್ಯಕ್ತಿತ್ವ ಮತ್ತು ಅವರ ಬುದ್ಧಿಮತ್ತೆಯ ಹೆಚ್ಚಿನ ಅವಶ್ಯಕತೆ ಇದೆ. ಯುವಕರನ್ನು ಈ ಕ್ಷೇತ್ರದಲ್ಲಿ ಸದ್ರಢಗೊಳಿಸುವುದೇ ಸಂಘದ ಉದ್ದೇಶ. ಅದಕ್ಕಾಗಿ ಸಂಘವು ಎಲ್ಲ ರೀತಿಯ ಸಹಾಯಕ್ಕೆ ಆದ್ಯತೆ ನೀಡುತ್ತಿದೆ. ಯುವಕರು ಸಂಘಕ್ಕೆ ಬಂದು ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಇದರಿಂದಾಗಿ ಅವರಿಗೆ ಭವಿಷ್ಯದ ಬಗ್ಗೆ ಉತ್ತಮ ಮಾರ್ಗದರ್ಶನ ದೊರಕುತ್ತದೆ. ಎಲ್ಲರೂ ಅದರ ಲಾಭ ಪಡೆಯಬೇಕು ಎಂದು ಒತ್ತಿಹೇಳಿದರು.
ಸಂಘದ ಯುವ ವಿಭಾಗದ ಕಾರ್ಯಧ್ಯಕ್ಷರಾದ ಶ್ರೀ ವಿಶಾಲ್ ದೇವಾಡಿಗ ಮಾತನಾಡಿ ಸಂಘವು ಯುವಕರಿಗೆ ನೀಡುವ ಸಲಹೆ, ಸಹಕಾರ ಮತ್ತು ಮಾರ್ಗದರ್ಶನದ ಲಾಭ ಪಡೆಯುತ್ತಾ ಸಂಘದ ಚಟುವಟಿಗೆಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆನೀಡಿದರು.
ಸಂಘದ ಶಿಕ್ಷಣ ಸಮಿತಿಯ ಕಾರ್ಯಧ್ಯಕ್ಷರಾದ CA ಶ್ರೀ ಜಗದೀಶ್ ದೇವಾಡಿಗರು ತನ್ನ ಸ್ವಾಗತ ಭಾಷಣದಲ್ಲಿ ಸಂಘದ ಪ್ರಸ್ತುತ ಜಾರಿಯಲ್ಲಿರುವ ಶಿಕ್ಷಣ ನೀತಿಯನ್ನು ತಿಳಿಸಿ, ಸಂಘದ ಪ್ರತೀ ವಿದ್ಯಾರ್ಥಿಗಳು ಪದವೀಧರರಾಗಬೇಕೆನ್ನುವ ಯೋಜನೆಯಿದ್ದು ಆ ನಿಟ್ಟಿನಲ್ಲಿ ಎಲ್ಲಾ ತರಹದ ಸಹಕಾರಕ್ಕೆ ಸಂಘವು ಬದ್ಧವಾಗಿದೆ ಎಂದರು. ವಿದ್ಯಾರ್ಥಿಗಳು ಆದಷ್ಟು ಸಂಖ್ಯೆಯಲ್ಲಿ ಸಂಘಕ್ಕೆ ಬಂದು ಸಂಘದ ಯೋಜನೆಯ ಲಾಭ ಪಡೆಯಬೇಕು ಎಂದು ಹೇಳಿದರು. ಅಲ್ಲದೆ ಈ ಯೋಜನೆಗೆ ಸಂಘ ನೀಡುವ ಸಹಕಾರಕ್ಕೆ ಧನ್ಯವಾದ ನೀಡಿದರು. ಇಂದಿನ ಕಾರ್ಯಕ್ರಮವನ್ನು ಆಯೋಜಿಸುವಾಗ ಹೆಚ್ಚಿನವರು ಊರಿನಲ್ಲಿ ಇದ್ದರೂ ಕೇವಲ ಕೆಲವೇ ದಿನದಲ್ಲಿ ಸಂಘದ ಆಡಳಿತ ಮಂಡಳಿ ಮತ್ತು ಯುವ ವಿಭಾಗವು ತ್ವರಿತ ಗತಿಯಿಂದ ಈ ಶಿಬಿರವನ್ನು ಆಯೋಜಿಸಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ನೀಡಿದರು.
ಈ ವೃತ್ತಿ ಮಾರ್ಗದರ್ಶನ ಶಿಬಿರಕ್ಕೆ ಮುಖ್ಯ ಉಪನ್ಯಾಸಕರಾಗಿ ವೃತ್ತಿ ಸಲಹೆಗಾರರಾದ ಶ್ರೀಮತಿ ವರ್ಷಾ ರೆಬೆಲ್ಲೊ ಇವರು ಆಗಮಿಸಿದ್ದರು. ವಿದ್ಯಾರ್ಥಿಗಳು ತಮ್ಮ SSC ಮತ್ತು HSC ಶಿಕ್ಷಣದ ಬಳಿಕ ಮುಂದಿನ ವಿದ್ಯಾಭ್ಯಾಸಗಳಿಗೆ ಯಾವ ಯಾವ ಶಿಕ್ಶಣ ಮತ್ತು ವೃತ್ತಿ ಶಿಕ್ಷಣಗಳ ಅವಕಾಶಗಳಿವೆ, ಅದಕ್ಕಾಗಿ ತಮ್ಮನ್ನು ಯಾವ ರೀತಿಯಲ್ಲಿ ಸಜ್ಜುಗೊಳಿಸಬೇಕು. ಯಾವ ಶಿಕ್ಷಣದಿಂದ ಯಾವ ವೃತ್ತಿ ಮತ್ತು ಅದರಿಂದ ದೊರೆಯುವ ಲಾಭಾಂಶದ ಬಗ್ಗೆ ಉತ್ತಮ ಮಾರ್ಗದರ್ಶನ ನೀಡಿದರು. ತಮಗೆ ಭವಿಷ್ಯದಲ್ಲಿ ಏನು ಮಾಡಬೇಕು ಎಂದು ನಿಮ್ಮ ಸಹಪಾಠಿಗಳಲ್ಲಿ ವಿಚಾರಿಸಬೇಡಿ. ಅವರಲ್ಲಿ ನಿಮ್ಮಷ್ಟೇ ಜ್ಞಾನ ಇರುವುದು. ನಿಮ್ಮ ಬುದ್ಧಿಮತ್ತೆಯ ಬಗ್ಗೆ ಹೆಚ್ಚು ಮಾಹಿತಿ ಇರುವುದು ನಿಮ್ಮ ಗುರುಗಳಿಗೆ. ಅವರಲ್ಲಿ ವಿಚಾರಿಸಿ ಎಂದು ಸಲಹೆ ನೀಡಿದರು.
ಸಂಘದ ಸದಸ್ಯರಾದ ಮತ್ತು ಶೈಕ್ಷಣಿಕ ತರಬೇತರಾದ ಶ್ರೀ ಯೋಗೇಶ್ ಶ್ರೀಯಾನ್ ಇವರು ‘ವೃತ್ತಿ ಮಾರ್ಗದರ್ಶನದ ಪ್ರಕರಣಗಳ ಅದ್ಜ್ಯಯನ’ (ಕೇಸ್ ಸ್ಟಡೀಸ್) ಈ ವಿಷಯದಲ್ಲಿ ಮಾರ್ಗದರ್ಶನ ನೀಡಿದರು. ಸಂಘದ ಮಹಿಳಾ ಸದಸ್ಯೆ ಮತ್ತು ಎಸ್.ಎಂ.ಶೆಟ್ಟಿ ಕಾಲೇಜು ಪೊವಾಯಿ ಇಲ್ಲಿ ಉಪನ್ಯಾಸಕಿಯಾದ ಶ್ರೀಮತಿ ಅಶ್ವಿನಿ ದೇವಾಡಿಗ ಇವರು ‘ಉದ್ಯೋಗ ಜಗತ್ತಿನಲ್ಲಿ ಕೌಶಲ್ಯದ ಮಹತ್ವ’ (ಸ್ಕಿಲ್ಸ್ ಥೇಟ್ ಮ್ಯಾಟರ್ಸ್) ವಿಷಯದಲ್ಲಿ ಉಪನ್ಯಾಸ ನೀಡಿದರು. ಸಂಘದ ಇನ್ನೋರ್ವ ಸದಸ್ಯ ಶ್ರೀ ಹೇಮನಾಥ ದೇವಾಡಿಗ ಇವರು ‘ವ್ಯಕ್ತಿತ್ವ ಅಭಿವೃದ್ಧಿ’ (ಪರ್ಸನಲಿಟಿ ಡೆವಲಪ್ಮೆಂಟ್) ಮತ್ತು ಸಂಘದ ಇನ್ನೋರ್ವ ಮಹಿಳಾ ಸದಸ್ಯೆ ಮತ್ತು ಥಾಕುರ್ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕಿ ವೃತ್ತಿಯಲ್ಲಿರುವ ಶ್ರೀಮತಿ ಸೋನಾಲಿ ಸೇರಿಗಾರ್ ಇವರು ‘ಉದ್ಯಮ ಕೌಶಲ್ಯದ ಅಭಿವೃದ್ಧಿ’ (ಇಂಟರ್ಪ್ರೆನೂರ್ ಡೆವಲಪ್ಮೆಂಟ್) ವಿಷಯಗಳಲ್ಲಿ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮಕ್ಕೆ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಹಿರಿಯಡ್ಕ ಮೋಹನ ದಾಸ್ . ಶ್ರೀ ವಾಸು ದೇವಾಡಿಗ, , ಉಪಾದ್ಯಕ್ಶರಾದ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಗೌ.ಪ್ರ. ಕಾರ್ಯದರ್ಶಿ ಶ್ರೀ ಪದ್ಮನಾಭ ಎ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಜೊತೆ ಕೋಶಾಧಿಕಾರಿಗಳಾದ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀ ಜಯ ಎಲ್. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಮೀಳಾ ಶೇರಿಗಾರ್, ಸಮಿತಿಯ ಸದಸ್ಯರು, ಉಪಸಮಿತಿಗಳ ಮತ್ತು ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಶ್ರೀಮತಿ ಉಮಾವತಿ ಗುಜರನ್, ಶ್ರೀ ಸುಧಾಕರ್ ಎಲ್ಲೂರು, ಶ್ರೀಮತಿ ಜಯಂತಿ ಎಂ. ದೇವಾಡಿಗ, ವ್ಯವಸ್ಥಾಪಕರಾದ ಶ್ರೀ ದಿನೇಶ್ ದೇವಾಡಿಗ ಮೊದಲಾದವರು ಸಹಕರಿಸಿದರು.
ಈ ಕಾರ್ಯಕ್ರಮದ ಯೋಜನೆಗೆ ಸಹಕರಿಸಿದ ಎಲ್ಲರನ್ನೂ ಗೌರವಿಸಲಾಯಿತು. ಯುವ ವಿಭಾಗದ ಸುಜಲ್ ದೇವಾಡಿಗ, ತನ್ವಿ ಶೇರಿಗಾರ್, ಶರಣ್ ಸೇರಿಗಾರ್, ರಕ್ಷಾ ದೇವಾಡಿಗ, ವಿನೀಶ್ ದೇವಾಡಿಗ, ವಿಶಾಲ್ ದೇವಾಡಿಗ, ಸಮೃದ್ಧಿ ಗುಜರನ್ ಮೊದಲಾದವರು ಸಹಕರಿಸಿದರು. ಕುಮಾರಿ ನಿಕಿತಾ ಗುಜರನ್
ಇವರು ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದ ಬಳಿಕ ಸಹಭೋಜನೆಯ ವ್ಯವಸ್ಥೆ ಮಾಡಲಾಗಿತ್ತು.

ಛಾಯಾಚಿತ್ರ - ಪ್ರಭಾಕರ್ ಎಸ್ ದೇವಾಡಿಗ