ದೇವಾಡಿಗ ಸಂಘ ಮುಂಬಯಿ, ಸಿಟಿ ಪ್ರಾದೇಶಿಕ ಸಮಿತಿಯಿಂದ ವರಮಹಾಲಕ್ಷ್ಮಿ ಪೂಜೆ ಸಂಪನ್ನ

ದೇವಾಡಿಗ ಸಂಘ ಮುಂಬಯಿ, ಸಿಟಿ ಪ್ರಾದೇಶಿಕ ಸಮಿತಿಯಿಂದ ವರಮಹಾಲಕ್ಷ್ಮಿ ಪೂಜೆ ಸಂಪನ್ನ

ಮುಂಬಯಿ ಆ. 23: ದೇವಾಡಿಗ ಸಂಘ ಮುಂಬಯಿಯ ಸಿಟಿ ಪ್ರಾದೇಶಿಕ ಸಮಿತಿಯಿಂದ ವರಮಹಾಲಕ್ಷ್ಮಿ ಪೂಜೆಯು ಇಂದು ಸಂಘದ ದಾದರ್ ಪೂರ್ವದ ದೇವಾಡಿಗ ಸೆಂಟರ್ ಸಭಾಗ್ರಹದಲ್ಲಿ ಬಹಳ ಅದ್ದೂರಿಯಿಂದ ಜರಗಿತು. ವಿದ್ವಾನ್ ಶ್ರೀ ಹರಿ ಶಾಂತಿ ಇವರ ನೇತೃತ್ವದಲ್ಲಿ ವರಮಹಾಲಕ್ಷ್ಮಿ ಪೂಜಾ ವಿಧಿಗಳು ನಡೆದವು. ಪ್ರಸಿದ್ಧ ಯಕ್ಷಗಾನ ಕಲಾವಿದೆ ಮತ್ತು ಭಾರತನಾಟ್ಯಮ್ ಗುರು ಶ್ರೀಮತಿ ದೀಕ್ಷಾ ಮತ್ತು ಶ್ರೀ ಪ್ರದೀಪ್ ಸೇರಿಗಾರ್ ದಂಪತಿಗಳು ಪೂಜೆಯಲ್ಲಿ ಭಾಗವಹಿಸಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡರು. ಸಿಟಿ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಬಾಲಚಂದ್ರ ದೇವಾಡಿಗ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಮಮತಾ ದೇವಾಡಿಗ ಮತ್ತು ಅವರ ವ್ಯವಸ್ಥಾಪಕ ಮಂಡಳಿ ಸದಸ್ಯರ ಸಹಕಾರದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು

ಈ ಸಮಾರಂಭವು ಸದಸ್ಯರ ಭಜನಾ ಕಾರ್ಯಕ್ರಮದಿಂದ ಆರಂಭಗೊಂಡಿತು. ಸುಮಾರು ಒಂದು ಗಂಟೆಯ ಭಜನಾ ಸಂಕೀರ್ತನೆ ನಡೆದು ಬಳಿಕ ದೇವರಿಗೆ ಪೂಜೆ ಮತ್ತು ಮಂಗಳಾರತಿ ಜರಗಿತು. ಪೂಜಾ ವಿಧಿಗಳನ್ನು ಶಾಸ್ತೋತ್ರವಾಗಿ ನೆರವೇಸಿದ ವಿದ್ವಾನ್ ಶ್ರೀ ಹರಿ ಶಾಂತಿ ಇವರು ವರಮಹಾಲಕ್ಷ್ಮಿ ಪೂಜೆಯ ಮಹತ್ವವನ್ನು ತಿಳಿಸಿದರು.

ಈ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗರು ಧರ್ಮಪತ್ನಿ ಶ್ರೀಮತಿ ಪ್ರಥಮ ಮಹಿಳೆ ಶ್ರೀಮತಿ ಪ್ರಮೀಳಾ ಪಿ. ದೇವಾಡಿಗ ಇವರು ಪ್ರಾಮುಖ್ಯವಾಗಿ ಉಪಸ್ಥಿತರಿದ್ದು, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಬಾಲಚಂದ್ರ ದೇವಾಡಿಗ ಇವರ ನೇತೃತ್ವದ ಶ್ರೀ ವರಮಹಾಲಕ್ಷ್ಮಿ ಪೂಜೆಗೆ ಆಗಮಿಸಿದ ಎಲ್ಲಾ ಸದಸ್ಯರಿಗೆ ಶುಭ ಕೋರಿದರು. ಅಲ್ಲದೆ ಸಂಘದ ಬರುವ ಶತಮಾನೋತ್ಸವಕ್ಕೆ ಎಲ್ಲರೂ ಉತ್ತಮ ರೀತಿಯಲ್ಲಿ ಸಹಕರಿಸುವಂತೆ ವಿನಂತಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಮಾಲತಿ ಜೆ. ಮೊಯಿಲಿ, ಗೌ. ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿನಿತೇಶ್ ದೇವಾಡಿಗ, ಜೊತೆ ಖಜಾಂಚಿ ಸುರೇಶ್ ದೇವಾಡಿಗ, ಸಂಘದ ಮಹಿಳಾ ವಿಭಾಗದ ಸಾಂಸ್ಕೃತಿಕ ವಿಭಾಗದ ಉಪ ಕಾರ್ಯಾಧ್ಯಕ್ಷೆ ಗೀತಾ ದೇವಾಡಿಗ, ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ವಿಭಾಗದ ಉಪಕಾರ್ಯಧ್ಯಕ್ಷೆ ಶ್ರೀಮತಿ ಪ್ರತಿಭಾ ಗಣೇಶ್ ದೇವಾಡಿಗ, ಕಾರ್ಯದರ್ಶಿ ಶ್ರೀಮತಿ ಸುಜಯ ವಿ. ದೇವಾಡಿಗ, ಯುವ ವಿಭಾಗದ ಕಾರ್ಯಧ್ಯಕ್ಷ ಶ್ರೀ ಬ್ರಿಜೇಶ್ ನಿಟ್ಟೇಕರ್, ಮಾಜಿ ಮಹಿಳಾ ಕಾರ್ಯಾಧ್ಯಕ್ಷರುಗಳಾದ ಶ್ರೀಮತಿ ಶಾಂತ ಜಿ. ಮೊಯಿಲಿ, ಶ್ರೀಮತಿ ಪ್ರಫುಲ್ಲಾ ವಿ. ದೇವಾಡಿಗ ಮತ್ತು ಶ್ರೀಮತಿ ರಂಜನಿ ಆರ್ ಮೊಯಿಲಿ, ಶ್ರೀಮತಿ ಪ್ರಜ್ಞಾ ಮೋಹನ ದಾಸ್, ಮೊದಲಾದವರು ಅಲ್ಲದೆ ಸಂಘದ ವಿವಿಧ ಪ್ರಾದೇಶಿಕ ಸಮಿತಿ ಸದಸ್ಯರು ಮತ್ತು ಮಹಿಳೆಯರು ಬಹು ಸಂಖ್ಯೆಯಲ್ಲಿ ಭಾಗವಹಿಸಿದರು.