ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿ ವಲಯದ ಸಾಮೂಹಿಕ ವರಲಕ್ಷ್ಮಿಪೂಜೆ

ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿ ವಲಯದ ಸಾಮೂಹಿಕ ವರಲಕ್ಷ್ಮಿಪೂಜೆ

ದೇವಾಡಿಗ ಸಂಘ ಮುಂಬೈ ಇದರ ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿ ವಲಯದ ಮಹಿಳಾ ವಿಭಾಗದವರಿಂದ ಸಾಮೂಹಿಕ ವರಲಕ್ಷ್ಮಿ ಮಹಾಪೂಜೆಯು ಆಗಸ್ಟ್ 16, 2019 ದೇವಾಡಿಗ ಸೆಂಟರ್ ದಾದರ್ ನಲ್ಲಿ ಜರಗಿತು. ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಗೀತ ಎಲ್. ದೇವಾಡಿಗ ಮತ್ತು ಕಾರ್ಯದರ್ಶಿ ಶ್ರೀಮತಿ ಸುಜಯ ವಿ. ದೇವಾಡಿಗ ಇವರ ಉಸ್ತುವಾರಿಯಲ್ಲಿ ನಡೆಯಿತು. ಪೂಜೆಯು ಸಾಯಂಕಾಲ 4 ಗಂಟೆಗೆ ಭಜನೆಯೊಂದಿಗೆ ಪ್ರಾರಂಭವಾಯಿತು.

ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಈ ವರಲಕ್ಷ್ಮಿ ಮಹಾಪೂಜೆಗೆ ಎಲ್ಲ ಪ್ರಾದೇಶಿಕ ಸಮನ್ವಯ ಸಮಿತಿಯ 90 ಸುಮಂಗಲೆಯರು ಸೇರಿ 140ಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿದರು. ಎಲ್ಲ ಸುಮಂಗಲೆಯರು ಶೃದ್ಧಾ ಭಕ್ತಿಯಿಂದ ಪೂಜೆಯಲ್ಲಿ ಭಾಗವಹಿಸಿದರಲ್ಲದೆ ಭಜನಾ ಕಾರ್ಯಕ್ರಮದಲ್ಲೂ ಪಾಲ್ಗೊಂಡರು. ತದನಂತರ ಆಗಮಿಸಿದ ಎಲ್ಲ ಸುಮಂಗಲೆಯರಿಗೆ ಸಾಂಪ್ರದಾಯಿಕವಾಗಿ ವಸ್ತ್ರ, ಬಳೆ, ಪ್ರಸಾದವನ್ನು ವಿತರಿಸಲಾಯಿತು. ಪೂಜೆಯ ಕೊನೆಯಲ್ಲಿ ಅನ್ನ ಪ್ರಸಾದದ ವ್ಯವಸ್ತೆಯನ್ನು ಮಾಡಲಾಗಿತ್ತು. ಅನ್ನ ಪ್ರಸಾದವನ್ನು ವಲಯದ ಮಾಜಿ ಕಾರ್ಯಾದ್ಯಕ್ಷರಾದ ಶ್ರೀ ಶ್ರೀಧರ್ ಶೇರಿಗಾರ್ ತಮ್ಮ ಮಗಳು ಮತ್ತು ಅಳಿಯನ ಮದುವೆಯ ಹತ್ತನೇ ವರ್ಷದ ಪರವಾಗಿ ನೀಡಿದರು.

ದಂಪತಿಯಾದ ಶ್ರೀ ಪ್ರೀತಂ ದೇವಾಡಿಗ ಮತ್ತು ಶ್ರೀಮತಿ ನಳಿನಾಕ್ಷಿ ಪಿ. ದೇವಾಡಿಗರಿಂದ ಪೂಜೆ ನೆರವೇರಿತು. ಶ್ರೀಮತಿ ಶಾಂತಾ ಜಿ. ಮೊಯಿಲಿಯರ ಜನ್ಮದಿನವನ್ನು ಆಚರಿಸಲಾಯಿತು. ಬೆಂಗಳೂರು ದೇವಾಡಿಗ ಸಂಘದಿಂದ ಆಗಮಿಸಿದ ಅಧ್ಯಕ್ಷ ಶ್ರೀ ಕೆ ಚಂದ್ರಶೇಕರ್, ಉಪಾಕಾರ್ಯಾದ್ಯಕ್ಷ ಶ್ರೀ ರಜನಿಕಾಂತ್ ಕುಡುಪಿ ಮತ್ತು ಕೋಶದೀಕಾರಿ ಶ್ರೀ ಚಂದ್ರ ಎಸ್ ಯಮ್ ಅವರನ್ನು ಹೂ ಗುಚ್ಛ ನೀಡಿ ಸನ್ಮಾನಿಸಲಾಯಿತು.

ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ ಮಾಜಿ ಅಧ್ಯಕ್ಷರಾದ ಶ್ರೀ ಗೋಪಾಲ್ ಮೊಯಿಲಿ, ಮಾಜಿ ಅಧ್ಯಕ್ಷರುಗಳಾದ ಕೆ. ಮೋಹನದಾಸ್, ಹಿರಿಯಡ್ಕ ಮೋಹನದಾಸ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ ಮೊಯಿಲಿ, ಸಿಟಿ ವಲಯದ ಕಾರ್ಯಾದ್ಯಕ್ಷ ಶ್ರೀ ಹೇಮನಾಥ್ ದೇವಾಡಿಗ, ಉಪಾಧ್ಯಕ್ಷ ಶ್ರೀ ಬಾಲಚಂದ್ರ ದೇವಾಡಿಗ, ಮಾಜಿ ಅಧ್ಯಕ್ಷ ಶ್ರೀ ಶ್ರೀಧರ್ ಶೇರಿಗಾರ್, ಮಹಿಳಾ ಉಪಕಾರ್ಯಾದ್ಯಕ್ಷೆ ಶ್ರೀಮತಿ ಲತಾ ವಿ. ಮೊಯಿಲಿ, ಸಲಹೆಗಾರರಾದ ಶ್ರೀಮತಿ ರಂಜಿನಿ ಮೊಯಿಲಿ, ಸುರೇಖಾ ದೇವಾಡಿಗ, ಮತ್ತು ಯುವ ವಿಭಾಗದ ಅಧ್ಯಕ್ಷ ಶ್ರೀ ನಿತೇಶ್ ದೇವಾಡಿಗ, ಕಾರ್ಯದರ್ಶಿ ಕುಮಾರಿ ದೀಕ್ಷಾ ದೇವಾಡಿಗ ಹಾಗೂ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಮೊಯಿಲಿ, ಮಾಜಿ ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್ ಎಲ್ಲ ಸಮನ್ವಯ ಸಮಿತಿಯ ಸಧ್ಯಸರು ಉಪಸ್ಥಿತರಿದ್ದರು.

ಸುಜಯ ವಿ ದೇವಾಡಿಗರ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.