ದೇವಾಡಿಗ ಭವನ ನೆರೂಲ್ ನಲ್ಲಿ ಆಗೋಸ್ಟ್ 15, 2019 ರಂದು ವಿಧ್ಯಾರ್ಥಿ ವೇತನ ವಿತರಣೆ

ದೇವಾಡಿಗ ಭವನ ನೆರೂಲ್ ನಲ್ಲಿ ಆಗೋಸ್ಟ್ 15, 2019 ರಂದು ವಿಧ್ಯಾರ್ಥಿ ವೇತನ ವಿತರಣೆ

ದೇವಾಡಿಗ ಭವನ ನೆರೂಲ್ ನಲ್ಲಿ ಆಗೋಸ್ಟ್ 15, 2019 ರಂದು ದೇವಾಡಿಗ ಸಂಘ ಮುಂಬೈ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶ್ರೀ ರವಿ ಸುಬ್ಬಯ್ಯ ದೇವಾಡಿಗರು ಸಮಾಜ ಭಾಂಧವರನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯೆಯಿಂದ ಮಾತ್ರ ಕುಟುಂಬದ ಸರ್ವತೋಮುಖ ಅಭಿವ್ರದ್ಢಿ ಸಾಧ್ಯ. ಹಾಗಾಗಿ ಬರುವ 2025 ಇಸವಿ ಅಂದರೆ ನಮ್ಮ ಸಂಘಕ್ಕೆ 100 ವರ್ಷ ತುಂಬುವಾಗ ನಮ್ಮ ದೇವಾಡಿಗರ ಮಕ್ಕಳೆಲ್ಲ ಕನಿಷ್ಟ ಪದವೀಧರರಾಗಬೇಕೆಂದು ಕರೆ ನೀಡಿದರು. ಉಚಿತ / ಅರ್ಹತೆ ವಿದ್ಯಾರ್ಥಿವೇತನ ವಿತರಿಸುವ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯ ಮಂಡಳಿ ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಅಂಕಗಳನ್ನು (89.60%) ಪಡೆದ ಕುಮಾರಿ ಪೂಜಾ ದಶರಥ್ ಚವಾಣ್, ಗುರು ನಾನಕ್ ರಾತ್ರಿ ಶಾಲೆ, ಸಾಂತಕ್ರೂಜ್ ಅವರನ್ನು ಗೌರವಿಸಿದರು. 200 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಸಂಘದ ಬೇರೆ ಬೇರೆ ಪ್ರಾದೇಶಿಕ ಸಮನ್ವಯ ಸಮಿತಿಯ ಕಚೇರಿ ದಾರಕರಿಂದ ವಿದ್ಯಾರ್ಥಿವೇತನವನ್ನು ಪಡೆದರು. ಪ್ರಧಾನ ಗೌರವ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ, ಜೊತೆ ಕಾರ್ಯದರ್ಶಿಗಳು ಶ್ರೀಮತಿ ಮಾಲತಿ ಜೆ ಮೊಯಿಲಿ ಮತ್ತು ಶಿಕ್ಷಣ ವಿಭಾಗದ ಅಧ್ಯಕ್ಷ ಶ್ರೀ ಕೃಷ್ಣ ಬಿ. ದೇವಾಡಿಗ ವಿದ್ಯಾರ್ಥಿವೇತನ ವಿತರಿಸುವುದರಲ್ಲಿ ಸಹಕಾರ ನೀಡಿದ ಸದಸ್ಯರ ಸಹಕಾರಕ್ಕಾಗಿ ಧನ್ಯವಾದ ನೀಡಿದರು.