ದೇವಾಡಿಗ ಸಂಘ ಮುಂಬಯಿ ಅಸಲ್ಫ ಪ್ರಾದೇಶಿಕ ಸಮನ್ವಯ ಸಮಿತಿಯ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ.

ದೇವಾಡಿಗ ಸಂಘ ಮುಂಬಯಿ ಅಸಲ್ಫ ಪ್ರಾದೇಶಿಕ ಸಮನ್ವಯ ಸಮಿತಿಯ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ.

ದೇವಾಡಿಗ ಸಂಘ ಮುಂಬಯಿ ಇದರ ಪ್ರಾದೇಶಿಕ ಸಮನ್ವಯ ಸಮಿತಿ ಅಸಲ್ಫದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ದಿನಾಂಕ 14.08.2022 ರಂದು ನಡೆಯಿತು. ಸಾಕಿನಕ 90 ಫೀಟ್ ರೋಡಿನಲ್ಲಿ ರುವ ಸಾಯಿನಾಥ್ ಸಿರಾಮಿಕ್ಸ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಅಸಲ್ಫ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಯೋಗೇಶ್ ದೇವಾಡಿಗರ ಅಧ್ಯಕ್ಷತೆಯಲ್ಲಿ ಕಿರು ಸಭಾ ಕಾರ್ಯಕ್ರಮ ನಡೆಯಿತು. ಶ್ರೀಮತಿ ಭವಾನಿ ಸಿ ಮೊಯಿಲಿಯವರು ಪ್ರಾಥನೆ ಗೈದರು ವೇದಿಕೆಯಲ್ಲಿ ಅತಿಥಿ ಗಣ್ಯರಾದ ದೇವಾಡಿಗ ಸಂಘ ಮುಂಬೈ ಯ ಅಧ್ಯಕ್ಷರಾದ ಶ್ರೀ ರವಿ ಯಸ್ ದೇವಾಡಿಗ, ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ನಾರಾಯಣ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನದಾಸ್ ಮತ್ತು ಶ್ರೀ ವಾಸು ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀಮತಿ ರಂಜಿನಿ ಆರ್ ಮೊಯಿಲಿ , ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ವೇದ್ ಪ್ರಕಾಶ್ ಮೊಯಿಲಿ ಉಪಸ್ಥಿತರಿದ್ದರು.ವಲಯದ ಕಾರ್ಯದರ್ಶಿ ಶ್ರೀ ಮೋಹನದಾಸ್ ಗುಜರಾನ್ ವೇದಿಕೆಯಲ್ಲಿದ್ದ ಗಣ್ಯರಿಗೆ ಹಾಗೂ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಸ್ವಾಗತ ಕೋರಿದರು. ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಯಸ್ ದೇವಾಡಿಗರು ತುಂಬಿದ ಸಭಾಗ್ರಹದಲ್ಲಿ ನೆರೆದಿದ್ದ ಸಮಾಜ ಬಂದವರನ್ನು ಉದ್ದೇಶಿಸಿ ಹಾಗೂ ವಲಯದ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರಲ್ಲದೆ ಎರಡು ವರ್ಷಗಳಲ್ಲಿ ಕೊರೊನ ಮಹಾಮಾರಿಯ ಸಂದರ್ಭ ಸಮಾಜದ ಜನರು ತುಂಬಾ ಕಷ್ಟಗಳಲಿ ಕಾಲ ಕಳೆಯುವ ಪರಿಸ್ಥಿತಿ ಇತ್ತು. ಈಗ ಅದು ಶಾಂತವಾಗಿ ಪುನಃ ಮೊದಲಿನ ಮಟ್ಟಕ್ಕೆ ಬಂದಿದೆ.ಭಾಂದವರೆಲ್ಲರೂ ಒಟ್ಟುಗೂಡಿ ನಮ್ಮ ಸಮಾಜದ ಒಳಿತಿಗಾಗಿ ಸಮಾಜ ಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳೋಣ ಅದಕ್ಕಾಗಿ ನನ್ನ ಸಂಪೂರ್ಣ ಸಹಕಾರವಿದೆ ಎಂದು ನೆರೆದಿದ್ದ ಎಲ್ಲರಿಗೂ ಶುಭ ಕೋರಿದರು.

ಮಾಜಿ ಅಧ್ಯಕ್ಷರಾದ ಶ್ರೀಎಚ್ ಮೋಹನದಾಸ್ ಮಾತನಾಡುತ್ತಾ ಎಲ್ಲರಿಗೂ ಶುಭ ಕೋರಿ ದೇವಾಡಿಗ ಸಂಘ ಶತಮಾನೋತ್ಸವ ನಡೆಸುರ ಸಂಭ್ರಮದಲ್ಲಿದೆ ಅದರಿಂದ ಈ ಮಹತ್ಕಾರ್ಯಕ್ಕೆ ಇಂದಿನಿಂದಲೆ ಎಲ್ಲರೂ ಕಾರ್ಯ ಪ್ರವರ್ತರಾಗಬೇಕೆಂದು ತನ್ನ ಹಿತನುಡಿಗಳನ್ನಾಡಿದರು. ಶ್ರೀ ವಾಸು ಯಸ್ ದೇವಾಡಿಗ, ಶ್ರೀ ವಿಶ್ವನಾಥ್ ದೇವಾಡಿಗ ಕಾರ್ಯಕ್ರಮಕ್ಕೆ ಶುಭ ಕೋರಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಘದ ಜೊತೆ ಕಾರ್ಯದರ್ಶಿ ಶ್ರೀ ಜಯ ಎಲ್ ದೇವಾಡಿಗ, ಶ್ರೀ ಸುರೇಶ ದೇವಾಡಿಗ, ಶ್ರೀ ಹೇಮನಾಥ ದೇವಾಡಿಗ, ಶ್ರೀ ರಘು ಮೊಯಿಲಿ, ಶ್ರೀ ನಿತೇಶ್ ದೇವಾಡಿಗ, ಉಪಸ್ಥಿತರಿದ್ದರು. ವಲಯದ ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ವೇದ್ ಪ್ರಕಾಶ್ ಮೊಯಿಲಿ ಮಾತನಾಡುತ್ತಾ ಯುವ ಜನರು ಸಂಘದ ಸಮಾಜ ಪರ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕೆಂದರು.ವಲಯದ ಕಾರ್ಯಾಧ್ಯಕ್ಷ ಶ್ರೀ ಯೋಗೇಶ್ ದೇವಾಡಿಗರು ಮಾತನಾಡುತ್ತ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೆ ಹಾಗೂ ನೆರೆದಿದ್ದ ಸಮಾಜ ಬಂದವರಿಗೆ ಶುಭ ಹಾರೈಸಿ ಕಳೆದೆರಡು ವರ್ಷಗಳಲ್ಲಿ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಯಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ ಆದ್ದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಮಾಜ ಪರ ಕೆಲಸಗಳಲ್ಲಿ ತೊಡಗಿಸಲು ಎಲ್ಲರ ಸಹಕಾರಬೇಕೆಂದು ತನ್ನ ಮನದಾಳದ ಮಾತುಗಳನ್ನಾಡಿದರು.

ತದನಂತರ ವೇದಿಕೆಯಲ್ಲಿ ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗರು ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯಿಲಿ, ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ ಮೊಯಿಲಿ ಮತ್ತು ಜೊತೆ ಖಚಾಂಜಿ ಶ್ರೀಮತಿ ಸುರೇಖಾ ಎಚ್ ದೇವಾಡಿಗ, ಶ್ರೀಮತಿ ಜಯಂತಿ ಆರ್ ಮೊಯಿಲಿ , ಶ್ರೀಮತಿ ಜಯಂತಿ ಎಂ ದೇವಾಡಿಗ , ಶ್ರೀಮತಿ ಪ್ರೇಮ ಮೋಹನದಾಸ್ ಅತ್ತಾವರ್ , ಶ್ರೀಮತಿ ಜಯಲಕ್ಷ್ಮಿ ಆರ್ ದೇವಾಡಿಗ, ಹಾಗೂ ವಲಯದ ಮಹಿಳಾ ಪದಾಧಿಕಾರಿಗಳು ಸೇರಿ ದೀಪ ಪ್ರಜ್ವಲಿಸಿ ಆಟಿಡೊಂಜಿ ದಿನ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಎಲ್ಲರನ್ನು ಸ್ವಾಗತಿಸಿದರು.

ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯಿಲಿ ಆಟಿ ತಿಂಗಳ ಮಹತ್ವದ ಬಗ್ಗೆ ಸಂವಿಸ್ತಾರವಾಗಿ ವಿವರಿಸಿದರು ಹಾಗೂ ಮಹಿಳೆಯರು ಮನೆಯಲ್ಲಿ ತಯಾರಿಸಿದ ತಿಂಡಿ ತಿನಸುಗಳ ಬಗ್ಗೆ ಪ್ರಕೃತಿಯಲ್ಲಿ ಸಿಗುವ ಕೆಲವೊಂದು ಔಷದಿಯ ಗುಣವುಳ್ಳ ತರಕಾರಿ, ಸೊಪ್ಪು ಇತ್ಯಾದಿಗಳ ಬಗ್ಗೆ ವಿವರಣೆ ನೀಡಿ ಶುಭ ಹಾರೈಸಿದರು. ವೇದಿಕೆಯಲ್ಲಿದ್ದ್ದ ಮಹಿಳೆಯರು ಆಟಿ ತಿಂಗಳಿನ ವಿಶೇಷ ಮಹತ್ವದ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗರು , ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಹರ್ಷ ವ್ಯಕ್ತ ಪಡಿಸಿದರಲ್ಲದೆ ಎಲ್ಲರಿಗೂ ಶುಭ ಕೋರಿ ಸಮಾಜದ ಏಳಿಗೆಗಾಗಿ ಸಮಾಜ ಪರ ಕಾರ್ಯಗಳಲ್ಲಿ ಹೆಚ್ಚಿನ ಒಲವು ಅಗತ್ಯ ಎಂದು ತನ್ನ ಮನದಾಳದ ಹಿತನುಡಿಗಳನ್ನಾಡಿದರು.

ಶ್ರೀಮತಿ ಶುಭಾ ಸತೀಶ್ ದೇವಾಡಿಗರು ರುಚಿಕರವಾದ ಸ್ವಾಧಿಷ್ಟಕರ ಅಡುಗೆಗಳನ್ನು ಮನೆಯಲ್ಲಿ ಮಾಡಿ ತಂದ ಮಹಿಳೆಯರಿಗೆ ಪ್ರೀತಿಯ ಉಡುಗೊರೆ ನೀಡಿ ಸತ್ಕರಿಸಿದರು. ಊರಿನಿಂದ ಬಂದ ಪಾವಂಜೆ ದೇವಾಡಿಗರ ಸಂಘದ ಪದಾಧಿಕಾರಿಗಳ . ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ಹೆಚ್ಚು ಮೆರುಗು ಬಂತು. ಶ್ರೀ ಮೋಹನದಾಸ್ ಗುಜರನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ದನ್ಯವಾದಗೈದರು. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀಮತಿ ಶುಭಾ ಸತೀಶ್ ದೇವಾಡಿಗ, ಶ್ರೀಮತಿ ಮಲ್ಲಿಕಾ ಶ್ರಿಯಾನ್, ಶ್ರೀ ರೇಖಾ ದೇವಾಡಿಗ, ಶ್ರೀಮತಿ ಕಸ್ತೂರಿ ಮೊಯಿಲಿ , ಶ್ರೀ ವೇದ್ ಪ್ರಕಾಶ್ ಮೊಯಿಲಿ ,ಶ್ರೀ ವಿಶಾಲ್ ದೇವಾಡಿಗ, ಶ್ರೀ ಹರೀಶ್ ದೇವಾಡಿಗ, ಶ್ರೀ ಚಿದಾನಂದ ಮೊಯಿಲಿ, ಶ್ರೀ ಜೀವನ್ ದೇವಾಡಿಗ, ಶ್ರೀ ಪ್ರಶಾಂತ್ ಮೊಯಿಲಿ ದುಡಿದರು, ಪದಾಧಿಕಾರಿಗಳ ಹಾಗೂ ವಲಯದ ಎಲ್ಲಾ ಸದಸ್ಯರ ನೆರವಿನಿಂದ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು.