ದೇವಾಡಿಗ ಸಂಘ ಮುಂಬಯಿ : ದೇವಾಡಿಗ ಸೆಂಟರ್ ದಾದರ್ ಇಲ್ಲಿ 75ನೇ ಸ್ವಾತಂತ್ರೋತ್ಸವ ಆಚರಣೆ

ದೇವಾಡಿಗ ಸಂಘ ಮುಂಬಯಿ : ದೇವಾಡಿಗ ಸೆಂಟರ್ ದಾದರ್ ಇಲ್ಲಿ 75ನೇ ಸ್ವಾತಂತ್ರೋತ್ಸವ ಆಚರಣೆ

ದೇವಾಡಿಗ ಸಂಘ ಮುಂಬೈ 75 ನೇ ಸ್ವಾತಂತ್ರೋತ್ಸವದ ದ್ವಜಾರೋಹಣವನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ದೇವಾಡಿಗರು ನೆರವೇರಿಸಿ ಎಲ್ಲರಿಗೂ ಶುಭ ಕೋರಿದರು. ಈ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ದೇಶಕ್ಕಾಗಿ ಪುಣ್ಯತ್ಯಾಗ ಮಾಡಿದ ಸ್ವಾತಂತ್ರ್ಯ ವೀರರನ್ನು ನೆನಪಿಸುತ್ತಾ ದೇಶದಲ್ಲಿ ಕೊರೋನ ಮಹಾಮಾರಿ ತೊಲಗಲಿ ಎಂದು ಕರೆಯಿತ್ತರು. ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಹೇಮನಾಥ್ ದೇವಾಡಿಗ, ಅಧ್ಯಕ್ಷರಾದ ಶ್ರೀ ಬಾಲಚಂದ್ರ ದೇವಾಡಿಗ, ಸಂಘದ ಕೋಶಾಧಿಕಾರಿ ಶ್ರೀಮತಿ ಸುರೇಖಾ ದೇವಾಡಿಗ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿ, ಶ್ರೀ ರಮೇಶ್ ಮೊಯಿಲಿ, ಹಾಗೂ ಮ್ಯಾನೇಜರ್ ಶ್ರೀ ಶಂಭು ದೇವಾಡಿಗರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಿವಂಗತ ಗೋಪಾಲ್ ಮೊಯಿಲಿಯವರನ್ನು ಸ್ಮರಿಸಲಾಯಿತು. ಎಲ್ಲರು ಧ್ವಜಕ್ಕೆ ವಂದನೆ ಸಲ್ಲಿಸಿ ವಂದೇ ಮಾತರಂ ಹಾಡಿದರು.